ಪರಿವರ್ತನಾ ಶಾಲೆ ಮತ್ತು ಪಿಯು ಕಾಲೇಜಿನ ವತಿಯಿಂದ ಶುಭಾಶಯಗಳು.

CBSE X ನೇ ತರಗತಿಯ ಎಲ್ಲಾ ಆತ್ಮೀಯ ಪೋಷಕರಿಗೆ ಪ್ರೀತಿಯ ಶುಭಾಶಯಗಳು.

ನಮ್ಮ ಸಂಸ್ಥೆಯ ಆಡಳಿತವು 18ನೇ ಫೆಬ್ರವರಿ 2024 ಭಾನುವಾರ ಬೆಳಿಗ್ಗೆ 10.30 ಗಂಟೆಗೆ ನಮ್ಮ ಶಾಲೆಯ ಆವರಣದಲ್ಲಿ ಆಡಳಿತ-ಶಿಕ್ಷಕ-ಪೋಷಕರ ಸಭೆಯನ್ನು ಏರ್ಪಡಿಸಿದೆ. ಆ ದಿನದಂದು ನಾವು ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ (ಹಾಲ್ ಟಿಕೆಟ್) ನೀಡುತ್ತಿದ್ದು ಜೊತೆಗೆ ಶಿಕ್ಷಕರು ನಿಮ್ಮ ಮಕ್ಕಳ ಕಾರ್ಯಕ್ಷಮತೆಯನ್ನು ನಿಮ್ಮ ಜೊತೆ ಚರ್ಚಿಸಲಿದ್ದಾರೆ. ಆ ದಿನದಂದು ತಾವು ತಪ್ಪದೇ ಖಂಡಿತವಾಗಿ ಬರುವುದಲ್ಲದೇ, ಮಕ್ಕಳ ಪ್ರವೇಶಪತ್ರಗಳಿಗೆ ಸಹಿ ಹಾಕಬೇಕಾಗಿದೆ.

ತಮ್ಮ ಆಗಮನಕ್ಕಾಗಿ ಕಾಯುತ್ತಿದ್ದೇವೆ. ವಂದನೆಗಳು,

ಚೇತನ್ ರಾಮ್ ಆರ್. ಎ., ಮ್ಯಾನೇಜಿಂಗ್ ಟ್ರಸ್ಟಿ
ಪರಿವರ್ತನಾ ಶಾಲೆ, ಶ್ರೀರಂಗಪಟ್ಟಣ.

Greetings from Parivarthana School and PU College.

Good afternoon, all dear parents of Class X CBSE.

The management of our institution has arranged a management-teachers-parents meeting on Sunday, February 18, 2024, at sharp 10.30 a.m. in our school premises. On the day we are issuing admission tickets (hall tickets). The management and teachers are going to discuss your ward performance. Your presence and signature for admission tickets on that day are compulsory.

Regards
Chethan Ram R A
Managing Trustee
Parivarthana School
Srirangapatna.

Important Message

ಆತ್ಮೀಯ ಪೋಷಕ ಬಂಧುಗಳೇ,ಮಕ್ಕಳೆಲ್ಲಾ ಆನಂದದಿಂದ ಕಷ್ಟಪಟ್ಟು-ಇಷ್ಟಪಟ್ಟು ಚೆನ್ನಾಗಿ ಓದುತ್ತಿದ್ದಾರೆ. ಸಿದ್ಧತಾ ಪರೀಕ್ಷೆಗಳು ನಡೆಯುತ್ತಿವೆ. ಎಲ್ಲವೂ ವೇಗ ಪಡೆದುಕೊಂಡಿದೆ. ಕೊನೆಯ ಪರೀಕ್ಷೆಗಳು ಕೆಲವರಿಗೆ ಆರಂಭವಾಗಿವೆ.ಈ ಸಂದರ್ಭದಲ್ಲಿ ಕೆಲ ಪೋಷಕರು ಭಾನುವಾರಗಳಂದು ಬರುವುದು-ತಿಂಡಿ, ಆಹಾರ ತರುವುದು ಮಾಡುತ್ತಿದ್ದೀರಿ.